Search Literature Discussion FAQ's Authors Vachanas Other Writeups
Home Search Vachanakaras Vachanas Vachana Songs

ಸಾಧನೆ

 

     ಕರ್ನಾಟಕದ ಇತಿಹಾಸದಲ್ಲಿ ಒಂದು ಅಪೂರ್ವ ಘಟನೆಯಾಗಿರುವ ಶಿವಶರಣರ ಚಳವಳಿಯ ಫಲವಾಗಿ, ಒಂದು ಅನ್ಯೋನ್ಯ ಪ್ರಯೋಗವಾಗಿ ಎಲ್ಲ ವರ್ಗ ವರ್ಣಗಳ ಅಭಿವ್ಯಕ್ತಿಯಾಗಿ ಸೃಷ್ಟಿಯಾಗಿರುವ ವಚನಗಳು ಭಾರತೀಯ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಪಡೆದಿವೆ.

 

     ವಚನಸಾಹಿತ್ಯ ಅನುಭಾವ ಸಾಹಿತ್ಯ. ಈ ಅನುಭಾವ ಸಾಹಿತ್ಯವು ಹೃದಯಕ್ಕೆ ಮುಟ್ಟುವಂತೆ ಅಭಿವ್ಯಕ್ತವಾಗಿದೆ.  ಜನರಿಂದ ಜನರಿಗಾಗಿ ಹುಟ್ಟಿದ ಈ ಸಾಹಿತ್ಯವನ್ನು ಇಂದಿನ ಓದುಗರಿಗೆ ತಲುಪಿಸುವುದು ಪ್ರಜಾಪ್ರಭುತ್ವ ಸರ್ಕಾರದ ಒಂದು ಮುಖ್ಯ ಕರ್ತವ್ಯವಾಗಿದೆ.

 

     ಸರ್ಕಾರದ ಕರ್ತವ್ಯವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 15 ಸಂಪುಟಗಳಲ್ಲಿ 1993ರಲ್ಲಿ ಹಾಗೂ 2001ರಲ್ಲಿ ಸಮಗ್ರ ವಚನಸಾಹಿತ್ಯವನ್ನು ಸರ್ಕಾರವು ಪ್ರಕಟಿಸಿ ಹೊರತಂದಿರುತ್ತದೆ.  ಇದೀಗ ಆಧುನಿಕ ತಂತ್ರಜ್ಞಾನದ ಅಭಿವೃದ್ಧಿಗೆ ಅನುಗುಣವಾಗಿ ಸಮಗ್ರ ವಚನಸಾಹಿತ್ಯವನ್ನು ಅಂತರಜಾಲದ ಮೂಲಕ ವಿಶ್ವದ ಮೂಲೆ ಮೂಲೆಗೆ ತಲುಪಿಸುವ ಕಾರ್ಯವನ್ನು ಅನುಷ್ಠಾನಗೊಳಿಸಲಾಗುತ್ತಿದೆ.  249 ಜನ ವಚನಕಾರರ 21,674 ವಚನಗಳು ಅಂತರಜಾಲದಲ್ಲಿ ಲಭ್ಯವಾಗಲಿದೆ.  ಅಲ್ಲದೆ 1000 ವಚನಗಳನ್ನು ವಿವಿಧ ಸಂಗೀತ ನಿರ್ದೇಶಕ ರಿಂದ ವಿವಿಧ ಧಾಟಿಗಳಲ್ಲಿ ರಾಗ ಸಂಯೋಜಿಸಿ ಹಾಡಿಸಿ, ಧ್ವನಿ ಮುದ್ರಿಸಿ ಅಂತರಜಾಲಕ್ಕೆ ಅಳವಡಿಸಲಾಗಿದೆ.

 

     ಬಹುಶಃ ಭಾರತೀಯ ಭಾಷಾ ಸಾಹಿತ್ಯದಲ್ಲಿಯೇ ಇಂಥದೊಂದು ಮಹತ್ವದ ಯೋಜನೆ ಕಾರ್ಯಾನುಷ್ಠಾನಗೊಂಡಿದೆ ಎಂಬ ಹೆಮ್ಮೆ ನಮ್ಮದು. ಸಮಗ್ರ ವಚನಸಾಹಿತ್ಯವು ವಿಶ್ವಾದ್ಯಂತ ಆಸಕ್ತರನ್ನು ತಲುಪಿದಲ್ಲಿ ನಮ್ಮ ಶ್ರಮ ಸಾರ್ಥಕವಾಗುವುದು.
                                                                                                              ಶ್ರೀಮತಿ ಉಮಾಶ್ರೀ
  01.03.2015                                                                                   ಕನ್ನಡ ಮತ್ತು ಸಂಸ್ಕೃತಿ ಇಲಾಖೆ
  ಬೆಂಗಳೂರು                                                                                              ಕರ್ನಾಟಕ ಸರ್ಕಾರ

ಯೋಜನೆಯನ್ನು ಕುರಿತು

ಅನಾವರಣ

ಆಶಯ

ಸಾಧನೆ

ನಮ್ಮ ನುಡಿ

ಸಂಪಾದಕ ಮಂಡಳಿ

ಅಂತರಜಾಲ ತಾಣ ಕುರಿತು

ಸಂದೇಶ

ಹೊನ್ನುಡಿ

ಪ್ರಕಾಶಕರ ಮಾತು

ಕಠಿಣ ಶಬ್ದಗಳ ಅರ್ಥ

Copyright | Disclaimer | Privacy Policy | Contact us  

Powered by Department of Kannada and Culture