Search Literature Discussion FAQ's Authors Vachanas Other Writeups
Home Search Vachanakaras Vachanas Vachana Songs

ಅಂತರಜಾಲ ತಾಣ ಕುರಿತು

 

v     ಸಮಗ್ರ ವಚನಸಾಹಿತ್ಯದ ಪಠ್ಯ ಮತ್ತು ಒಂದು ಸಾವಿರ ವಚನಗಳ ಗಾಯನವನ್ನು ಪ್ರಪ್ರಥಮ ಬಾರಿಗೆ ಅಂತರಜಾಲ ತಾಣದಲ್ಲಿ ಅಳವಡಿಸಲಾಗಿದೆ.

v     ಅಂತರಜಾಲ ತಾಣದಲ್ಲಿ 249 ಜನ ವಚನಕಾರರ 21,674 ವಚನಗಳ ಪಠ್ಯವನ್ನು ಪ್ರಕಟಿಸಲಾಗಿದೆ.

v     ವಚನಗಳಿಂದ ಆಯ್ದ 1000 ವಚನಗಳನ್ನು ವಿವಿಧ ಸಂಗೀತ ನಿರ್ದೇಶಕರಿಂದ ವಿವಿಧ ಧಾಟಿಗಳಲ್ಲಿ ರಾಗ ಸಂಯೋಜಿಸಿ, ವಿವಿಧ ಗಾಯಕರಿಂದ ಹಾಡಿಸಿ, ಧ್ವನಿ ಮುದ್ರಿಸಿ, ಅಂತರಜಾಲಕ್ಕೆ ಅಳವಡಿಸಲಾಗಿದೆ.

v     ಆಸಕ್ತ ವ್ಯಕ್ತಿ ತನಗೆ ಬೇಕಾದ ವಚನಕಾರರ ವಚನದ ಪಠ್ಯವನ್ನು ಅಂತರಜಾಲದಲ್ಲಿ ಆಯ್ದುಕೊಂಡು ಅದರ ಜೊತೆಗೆ ಸಂಗೀತವನ್ನು ಆಲಿಸಬಹುದಾಗಿದೆ. ಹೀಗೆ ಪಠ್ಯವನ್ನು ಏಕಕಾಲದಲ್ಲಿ ನೋಡುವ ಹಾಗೂ ಸಂಗೀತವನ್ನು ಆಲಿಸುವ ವಿಶೇಷತೆ ಇದೆ.

v     ಅಂತರಜಾಲ ತಾಣದಲ್ಲಿ ನುಡಿ ಕನ್ನಡ ತಂತ್ರಾಂಶವನ್ನು ಬಳಸಲಾಗಿದೆ. ಗಣಕಯಂತ್ರ ಗಳಲ್ಲಿ ನುಡಿ ತಂತ್ರಾಂಶ ಇಲ್ಲದಿದ್ದರೂ ಪಠ್ಯವನ್ನು ಅಂತರಜಾಲ ತಾಣದಲ್ಲಿ ನೋಡಲು ವಚನಗಳನ್ನು ಕೇಳಲು ಅವಕಾಶ ಕಲ್ಪಿಸಲಾಗಿದೆ.

v     ಒಟ್ಟಾರೆ ವಚನಸಾಹಿತ್ಯದ 10,000 ಪುಟಗಳಷ್ಟು ವಚನಗಳನ್ನು ಅಳವಡಿಸಲಾಗಿದೆ.

v     249 ಜನ ವಚನಕಾರರ ಸ್ವವಿವರಗಳನ್ನು ಅಳವಡಿಸಲಾಗಿದೆ.

v     21,674 ವಚನಗಳ ಅಕಾರಾದಿ ಪಟ್ಟಿಯನ್ನು ನೀಡಲಾಗಿದೆ.

v     ವಚನಕಾರರ ಪಟ್ಟಿಯಲ್ಲಿ ಬೇಕೆನಿಸಿದ ವಚನಕಾರರನ್ನು ಆಯ್ಕೆ ಮಾಡಿದರೆ ಅವರ ವಚನಗಳ ಮೊದಲ ಸಾಲುಗಳು ಗೋಚರವಾಗುತ್ತವೆ.

v     ಬೇಕಾದ ಮೊದಲ ಸಾಲಿನ ಮೇಲೆ ಕ್ಲಿಕ್ ಮಾಡಿದರೆ ವಚನದ ಪೂರ್ಣ ಪಠ್ಯ ದೊರೆಯುತ್ತದೆ. ಆ ವಚನಕ್ಕೆ ಸಂಗೀತ ರೂಪ ಇದ್ದರೆ ಧ್ವನಿವರ್ಧಕ ಚಿಹ್ನೆ ಕಾಣುತ್ತದೆ.

v     ಧ್ವನಿವರ್ಧಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿದರೆ ವಚನ ಗಾಯನವನ್ನು ಕೇಳಬಹುದಾಗಿದೆ.

v     ವಚನಗಳ ಗಾಯನಕ್ಕೆ ಒಟ್ಟಾರೆ 50 ಸಂಗೀತ ನಿರ್ದೇಶಕರ ಸೇವೆಯನ್ನು ಬಳಸಿಕೊಳ್ಳಲಾಗಿದೆ.

v     ವಚನ ಗಾಯನಕ್ಕೆ  350 ಸಂಖ್ಯೆಯ ಗಾಯಕರ ಸೇವೆಯನ್ನು ಬಳಸಿಕೊಳ್ಳಲಾಗಿದೆ.

v     ಈ ಅಂತರಜಾಲ ತಾಣದಲ್ಲಿ ಚರ್ಚಾವೇದಿಕೆ, ಲೇಖನ ಎಂಬ ಸೌಲಭ್ಯಗಳನ್ನು ಅಳವಡಿಸಲಾಗಿದೆ.

v     ಚರ್ಚಾವೇದಿಕೆಯಡಿ ಚರ್ಚೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

v     ಲೇಖನದ ಅಡಿ ಈ ಕುರಿತು ಆಸಕ್ತರು ಲೇಖನ ಬರೆದು ಅಂತರಜಾಲ ತಾಣದಲ್ಲಿ ಪ್ರಕಟಿಸಬಹುದಾಗಿದೆ.

v     ಸಮಗ್ರ ವಚನಸಾಹಿತ್ಯದ ವೆಬ್‍ಸೈಟ್ vachanasahitya.kannadasiri.co.in

v     ಈ ವೆಬ್‍ಸೈಟ್‍ನ್ನುwww.kannadasiri.co.in ಗೆ ಅಳವಡಿಸಲಾಗಿದೆ.

ಯೋಜನೆಯನ್ನು ಕುರಿತು

ಅನಾವರಣ

ಆಶಯ

ಸಾಧನೆ

ನಮ್ಮ ನುಡಿ

ಸಂಪಾದಕ ಮಂಡಳಿ

ಅಂತರಜಾಲ ತಾಣ ಕುರಿತು

ಸಂದೇಶ

ಹೊನ್ನುಡಿ

ಪ್ರಕಾಶಕರ ಮಾತು

ಕಠಿಣ ಶಬ್ದಗಳ ಅರ್ಥ

Copyright | Disclaimer | Privacy Policy | Contact us  

Powered by Department of Kannada and Culture