Search Literature Discussion FAQ's Authors Vachanas Other Writeups
Home Search Vachanakaras Vachanas Vachana Songs


ಸಂದೇಶ

 

 

    ಕನ್ನಡ ನಾಡಿನ ಪ್ರಥಮ ಪ್ರಜಾ ಸಾಹಿತ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಚನ ಸಾಹಿತ್ಯವು ನಾಡಿನ ಸಾಂಸ್ಕೃತಿಕ ಆಸ್ತಿಯಾಗಿದೆ. 12ನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ತಲೆದೋರಿದ ಅಪೂರ್ವ ಸಮಾಜ ಸುಧಾರಣೆಯ ಫಲವಾಗಿ ಹೊಸ ಸಮಾಜವೊಂದು ಸೃಷ್ಟಿಯಾಯಿತು. ಎಲ್ಲರೂ ಸಮಾನರು ಎಂಬ ತತ್ತ್ವ ಅನುಷ್ಠಾನಕ್ಕೆ ಬಂದಿತು. ಎಲ್ಲರೂ ದುಡಿಯಬೇಕೆಂಬ ಕಾಯಕ ತತ್ತ್ವ ಎಲ್ಲರೂ ಹಂಚಿ ಉಣಬೇಕೆಂಬ ದಾಸೋಹದ ತತ್ತ್ವಗಳು ಜಾರಿಗೆ ಬಂದವು.

 

     ಸಮಾಜದ ನೆಲೆಗಳನ್ನು ಗುರಿಯಿಟ್ಟು ಆಡಿದ ಶರಣರ ಮಾತು ವಚನವೆಂಬ ಸಾಹಿತ್ಯ ಪ್ರಕಾರವಾಗಿ ಮೂಡಿ ಬಂದಿತು. ಪುರುಷರಷ್ಟೇ ಪ್ರಧಾನವಾಗಿ ಮಹಿಳೆಯರೂ, ಕುಲಜರಷ್ಟೇ ಪ್ರಧಾನವಾಗಿ ಅಂತ್ಯಜರೂ, ಪ್ರಭುಗಳಷ್ಟೇ ಪ್ರಧಾನವಾಗಿ ಪ್ರಜೆಗಳೂ ಬಾಳಿದ್ದು, ಬರೆದದ್ದು ಬಹುಶಃ ಜಗತ್ತಿನ ಇತಿಹಾಸದಲ್ಲಿಯೇ ಏಕೈಕ ಉದಾಹರಣೆಯಾಗಿದೆ. ಈ ನೂತನ ಸಮಾಜದ ಆವಿಷ್ಕಾರದ ಫಲವಾಗಿ ವಚನಸಾಹಿತ್ಯವೆಂಬ ಅಪೂರ್ವ ಪ್ರಕಾರವೊಂದು ಸೃಷ್ಟಿಯಾಯಿತು.

 

     ತತ್ವಕ್ಕೆ ತತ್ವ, ಸಾಹಿತ್ಯಕ್ಕೆ ಸಾಹಿತ್ಯವಾಗಿರುವ ‘ವಚನ ವಾಙ್ಮಯ’ ಏಕಕಾಲಕ್ಕೆ ಆತ್ಮಕಲ್ಯಾಣವನ್ನೂ ಸಮಾಜ ಕಲ್ಯಾಣವನ್ನೂ ಪ್ರತಿಪಾದಿಸುವ ಮೂಲಕ ಜಾಗತಿಕ ಮಹತ್ವಗಳಿಸಿದೆ.

 

     ಈ ಸಾಹಿತ್ಯವನ್ನು ಇದೀಗ ಅಂತರ್ಜಾಲಕ್ಕೆ ಅಳವಡಿಸಿ, ವಿಶ್ವದಾದ್ಯಂತ ಎಲ್ಲ ಆಸಕ್ತರಿಗೆ ತಲುಪುವಂತೆ ಮಾಡಲಾಗಿದೆ. ಈ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆಯಲೆಂದು ಆಶಿಸುತ್ತೇನೆ.

                      

    

            

 

ದಿನಾಂಕ:01.03.2015                                                                         ಸಿದ್ದರಾಮಯ್ಯ

            ಮುಖ್ಯಮಂತ್ರಿಗಳು

            ಕರ್ನಾಟಕ ಸರ್ಕಾರ.

 

ಯೋಜನೆಯನ್ನು ಕುರಿತು

ಅನಾವರಣ

ಆಶಯ

ಸಾಧನೆ

ನಮ್ಮ ನುಡಿ

ಸಂಪಾದಕ ಮಂಡಳಿ

ಅಂತರಜಾಲ ತಾಣ ಕುರಿತು

ಸಂದೇಶ

ಹೊನ್ನುಡಿ

ಪ್ರಕಾಶಕರ ಮಾತು

ಕಠಿಣ ಶಬ್ದಗಳ ಅರ್ಥ

Copyright | Disclaimer | Privacy Policy | Contact us  

Powered by Department of Kannada and Culture