ಆದಯ್ಯ |
1001 ಪಂಚಗವ್ಯದಿಂದಾದ ಗೋಮಯವ ತಂದಾರಿಸಿ ಪಂಚಾಮೃತದ ಸಂಪರ್ಕದಿಂ ಪಂಚಾಕ್ಷರಿಯ ಮಂತ್ರದಿಂದಭಿಮಂತ್ರಿಸಿ ಶಿವಜ್ಞಾನವಹ್ನಿಯಲ್ಲಿ ದಹಿಸಿ ಆ ವಿಭೂತಿಯಂ ಸುಕೃತದಿಂ ತೆಗೆದುಕೊಂಡು ಎಡದ ಹಸ್ತದೊಳ್ವಿಡಿದುಕೊಂಡು, ಬಲದ ಹಸ್ತದಿಂ ಮುಚ್ಚಿಕೊಂಡು ಜಲಮಿಶ್ರಮಂ ಮಾಡಿ, ಲಲಾಟ ಮೊದಲಾಗಿ ದಿವ್ಯಸ್ಥಾನಂಗಳೊಳು ಧರಿಸಿ ಲಿಂಗರ್ಚನೆಯ ಮಾಡುವ ಶರಣ ತಾನೆ ವೇದವಿತ್ತು. ಆತನೆ ಶಾಸ್ತ್ರಜ್ಞ, ಆತನೆ ಸದ್ಯೋನ್ಮುಕ್ತನಯ್ಯಾಸೌರಾಷ್ಟ್ರ ಸೋಮೇಶ್ವರಾ. |