ಹೇಮಗಲ್ಲ ಹಂಪ |
1022 ಪಂಕದಲ್ಲಿ ಬಿದ್ದ ಪಶುವಿನಂತೆ, ಕಿರಾತನ ಕೈಯ ಮೃಗದಂತೆ, ಗರುಡನ ಮುಂದಿನ ಸರ್ಪನಂತೆ, ಸಿಂಹದ ಮುಂದಣ ಕರಿಯಂತೆ, ದೀಪದ ಮುಂದಣ ಪತಂಗನಂತೆ, ಪಾಪಿಯ ಕೂಸಿನಂತೆ. ಇಂತಿವೆಲ್ಲಕ್ಕೆಯೂ ಸ್ಥಿರವಿಲ್ಲದಂತೆ, ಮಾಯವೆಂಬ ರಾಕ್ಷಿಯ ಬಲೆಯಲ್ಲಿ ಸಿಲ್ಕಿ ಬಳಲುತಿರ್ದೆ. ನಿನಗನ್ಯನಾದ ಕಾರಣ ಎನಗೀ ದುರಿತಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. |