ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ |
1303 ಇಂತಪ್ಪ ದಿವ್ಯಚಕ್ರಮಂಬುಜ ಪತ್ರೆ ಚಿನ್ನ ಬೆಳ್ಳಿ ತಾಮ್ರ ಮೊದಲಾದವರ ತಗಡುಗಳೊಳಗರು ಚಂದನ ಕುಂಕುಮ ಕರ್ಪೂರ ಗೋರೋಚನಾದಿ ದ್ರವ ದ್ರವ್ಯಂಗಳಿಂ ಬರೆದು ಕಂಡಿಕೆಯಂ ಮಾಡಿ ಶಿರದೊಳ್ತಳೆಯೆ ಸಮಸ್ತ ವಶ್ಯ ರೋಗಾಪಹರಣ ಭೋಗ ಮೋಕ್ಷಾದಿಗಳಪ್ಪವೆಂದುಸಿರ್ದೆಯಯ್ಯಾ,ಪರಮ ಶಿವಲಿಂಗೇಶ್ವರ ಫಣೀಶ್ವರ ಕಂಕಣ ಕರಾ. |