ಬಾಚಿಕಾಯಕದ ಬಸವಣ್ಣ |
218 ಪಂಚರತ್ನವೆಂಬ ಆಕಾರದ ಚಿತ್ಪಿಂಡದೊಳಗೆ ಸವಿಯುವ ಸವಿಯ ಸವಿದು ನೋಡುತ್ತಿರಲು ಒಂದು ಸ್ಥಾನವುಂಟು. ಆ ಸ್ಥಾನದೊಳಗೆ ದಿವ್ಯರತ್ನದ ಕುಂಭವುಂಟು. ಆ ಕುಂಭದೊಳಗೊಂದು ಮಹಾರತ್ನದ ಕಮಲವುಂಟು. ಆ ಕಮಲದೊಳಗಣ ಅನಾದಿ ಅಮೃತದೊಳಗೆ ನೇಹ.......ವ ಶುದ್ಧವ ಮಾಡಿ ಆ ಕಮಲದ ನನೆಯ ಹತ್ತಿ, ಇನಿದಾಗಿ ಉಂಡುಂಡು ಅನುವಾಗಿ ನಿಂದು ನೋಡುವ ಸುಳುಹು ಬೆಳಗು ತಾನೆ ಕಾ[ಣಾ], ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲರಾಜೇಶ್ವರಲಿಂಗವು ನಿರಾಳ ನಿಶ್ಚಿಂತನು. |