ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಕಂಗಳ ಕಳೆಯೊಳಗೊಂಡು ಲಿಂಗವ ಕಂಡೆ,
485
ಅಂಗದ ಕಂಗಳ ಕಳೆಯೊಳಗೊಂಡು ಲಿಂಗವ ಕಂಡೆ,
ಅದು ಕಾಮಾರಿ ನೋಡಾ.
ಆ ಲಿಂಗ ಸಂಗದಿಂದ ಅನಂಗ ಸಂಗವ ಕೊಡಹಿ
ಅವಿರಳ ಪರಬ್ರಹ್ಮನಾಗಿ
ಅರಿಷಡುವರ್ಗಂಗಳ ಗರ್ವವ ಮುರಿದನು ನೋಡಾ ಶರಣನು,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.


ಸಂಗೀತ ನಿರ್ದೇಶಕರು : ಎಂ. ಎಸ್. ವಿದ್ಯಾ
ಹಾಡಿದವರ ಹೆಸರು : ಭಾವನಾ ಕೃಷ್ಣನ್
ರಾಗ : ಸುರುಟಿ
ತಾಳ : ತ್ರಿಶ್ರನಡೆ ಆದಿ
ಶೈಲಿ : ಕರ್ನಾಟಕ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ವೀಣೆ - ಭಾಗ್ಯಲಕ್ಷ್ಮೀ ಚಂದ್ರಶೇಖರ್
ಕೊಳಲು - ಸ್ಮಿತಾ ಶ್ರೀಕಿರಣ್
ಪಿಟೀಲು - ಕೆ.ಟಿ. ಉದಯ್ ಕಿರಣ್
ಮೃದಂಗ - ಎಂ. ಗುರುರಾಜ್ ಮತ್ತು ಎ. ರಾಧೇಶ್
ವಿವಿಧ ವಾದ್ಯಗಳು - ಮೋರ್ಸಿಂಗ್ - ಎಂ. ಗುರುರಾಜ್.

ನಿರ್ಗಮನ