ಶಿವನಾಗಮಯ್ಯ
ಅಂಗದ ಮೇಲೆ ಲಿಂಗವಿದ್ದ ಬಳಿಕ, ಲಿಂಗಹೀನರ ಬೆರಸಲಾಗದು.
133
ಅಂಗದ ಮೇಲೆ ಲಿಂಗವಿದ್ದ ಬಳಿಕ, ಲಿಂಗಹೀನರ ಬೆರಸಲಾಗದು.
ಅಂಗದ ಮೇಲೆ ಲಿಂಗವಿದ್ದ ಬಳಿಕ,
ಲಿಂಗ ಮುಂತಾಗಿ ಎಲ್ಲಾ ಕ್ರೀಗಳನೂ ಗಮಿಸಬೇಕಲ್ಲದೆ,
ಅಂಗ ಮುಂತಾಗಿ ಗಮನಿಸಲಾಗದು.
ಲಿಂಗಸಂಬಂಧಿಯಾಗಿ ಅಂಗ ಮುಂತಾಗಿಪ್ಪವರು ಲಿಂಗಕ್ಕೆ ದೂರವಯ್ಯಾ,ನಾಗಪ್ರಿಯ ಚೆನ್ನರಾಮೇಶ್ವರಾ.


ಸಂಗೀತ ನಿರ್ದೇಶಕರು : ಹೆಚ್. ಕೆ. ನಾರಾಯಣ್
ಹಾಡಿದವರ ಹೆಸರು : ಸುರೇಖ ಕೆ.ಎಸ್
ರಾಗ : ಹಿಂದೋಳ
ತಾಳ : ಆದಿ
ಶೈಲಿ : ಕರ್ನಾಟಕ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೀ ಬೋರ್ಡ್ - ಉಮೇಶ್
ಕೊಳಲು - ಎಂ. ಕೆ. ಪ್ರಾಣೇಶ್
ತಬಲ - ಸತ್ಯಮೂರ್ತಿ
ಸ್ಪೆಷಲ್ ಎಫೆಕ್ಟ್ - ನಾಗರಾಜು .

ನಿರ್ಗಮನ