ಅಲ್ಲಮಪ್ರಭುದೇವರು
ಊರಕ್ಕಿ ಊರೆಣ್ಣೆ;_`ಮಾರಿಕವ್ವ ತಾಯೆ ಬಾರೆ,
407ಊರಕ್ಕಿ ಊರೆಣ್ಣೆ;_`ಮಾರಿಕವ್ವ ತಾಯೆ ಬಾರೆ, ಕುಮಾರನ ತಲೆಗಾಯಿ' ಎಂಬಂತೆ; ಕಾಡ ಹೂ ಕೈಯ ಲಿಂಗವ ಪೂಜಿಸುವಾತನ ಭಕ್ತನೆಂಬರು, ಅಲ್ಲ. ತಾನು ಲಿಂಗ ತನ್ನ ಮನವೆ ಪುಷ್ಪ. ಪೂಜೆಯ ಪೂಜಿಸುವಾತನೆ ಸದ್ಭಕ್ತನು_ಗುಹೇಶ್ವರಾ.


ಸಂಗೀತ ನಿರ್ದೇಶಕರು : ಬಿ.ಕೆ. ಸುಮಿತ್ರಾ
ಹಾಡಿದವರ ಹೆಸರು : ಬಿ.ಕೆ.ಸುಮಿತ್ರಾ ಮತ್ತು ವೃಂದ
ರಾಗ : ಭೈರವ್
ತಾಳ : ಚತುರಶ್ರ
ಶೈಲಿ : ಜನಪದ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೀ ಬೋರ್ಡ್ - ಉಮೇಶ್
ತಬಲ - ಸತ್ಯಮೂರ್ತಿ
ಕೊಳಲು - ಮಹೇಶ್
ಗಿಟಾರ್ -ಗಿರಿ
ರಿದಂ ಪ್ಯಾಡ್ - ಪದ್ಮನಾಭ ಕಾಮತ್.

ನಿರ್ಗಮನ