ಸೊಡ್ಡಳ ಬಾಚರಸ
ಬರದಲ್ಲಿ ಅರಲುಗೊಂಡವಂಗೆ ಅಮೃತ ಸಿಕ್ಕಿದಂತೆ,
786
ಬರದಲ್ಲಿ ಅರಲುಗೊಂಡವಂಗೆ ಅಮೃತ ಸಿಕ್ಕಿದಂತೆ,
ಜರಾಮರಣ ದುಃಖಿಗೆ ಮರುಜವಣಿಗೆಯ ಕಂಡಂತೆ,
ಭವದ ಬಾಗಿಲ ಹೊಗದೆ ಬದುಕಿದೆನಯ್ಯಾ ನಿತ್ಯವ ಕಂಡು.
ಒಳಗೆ ಬೆಳಗುವ ಪ್ರಕಾಶ ಹೊರಗೆ ಮೂರ್ತಿಗೊಂಡಂತೆ,
ಕಂಗೆ ಮಂಗಳವಾಯಿತ್ತಯ್ಯಾ.
ಮಹಾಘನದಲ್ಲಿ ಸಾಕಾರ ಸೊಡ್ಡಳನ ಶರಣ ಪ್ರಭುವಿನ ನಿಲವಿಂಗೆನಮೋ ನಮೋ ಎನುತಿರ್ದೆನು.


ಸಂಗೀತ ನಿರ್ದೇಶಕರು : ಎಂ. ಎಸ್. ವಿದ್ಯಾ
ಹಾಡಿದವರ ಹೆಸರು : ದಿವ್ಯಾ ಗಿರಿಧರ್
ರಾಗ : ರೀತಿಗೌಳ
ತಾಳ : ಮಿಶ್ರಝಂಪೆ
ಶೈಲಿ : ಕರ್ನಾಟಕ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ವೀಣೆ - ಭಾಗ್ಯಲಕ್ಷ್ಮಿ ಚಂದ್ರಶೇಖರ್
ಕೊಳಲು - ಸ್ಮಿತಾ ಶ್ರೀಕಿರಣ್
ಪಿಟೀಲು - ಕೆ.ಟಿ. ಉದಯ್ ಕಿರಣ್
ಮೃದಂಗ - ಎಂ. ಗುರುರಾಜ್ ಮತ್ತು ಎ. ರಾಧೇಶ್
ವಿವಿಧ ವಾದ್ಯಗಳು - ಮೋರ್ಸಿಂಗ್ - ಎಂ. ಗುರುರಾಜ್.

ನಿರ್ಗಮನ