ಚೆನ್ನಬಸವಣ್ಣ
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಕ್ಷೇತ್ರತೀರ್ಥಕ್ಕೆ ಹೋಗಲೇಕಯ್ಯ!
77ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಕ್ಷೇತ್ರತೀರ್ಥಕ್ಕೆ ಹೋಗಲೇಕಯ್ಯ! ಅಂಗದ ಮೇಲಣ ಲಿಂಗ [ರಂಗದ] ಕಲ್ಲ ತಾಗಿದರೆ ಆವುದ ಘನವೆಂಬೆನಾವುದ ಕಿರಿದೆಂಬೆ! ತಾಳ ಸಂಪುಟಕ್ಕೆಬಾರದ ಘನವನರಿಯದೆ ಕೆಟ್ಟರು. ಜಂಗಮದರ್ಶನ ಶಿರಮುಟ್ಟಿ ಪಾವನ, ಲಿಂಗದರ್ಶನ ಕರಮುಟ್ಟಿ ಪಾವನ. ಹತ್ತರಿದ್ದ ಲಿಂಗವ ಹುಸಿಮಾಡಿ, ದೂರಲಿದ್ದ ಲಿಂಗಕ್ಕೆ ನಮಸ್ಕರಿಸುವ ವ್ರತಗೇಡಿಯ ತೋರದಿರಯ್ಯಾ! ಕೂಡಲಚೆನ್ನಸಂಗಯ್ಯಾ.


ಸಂಗೀತ ನಿರ್ದೇಶಕರು : ಶಿವಮೊಗ್ಗ ಕೆ. ಯುವರಾಜ್
ಹಾಡಿದವರ ಹೆಸರು : ಶಂಕರ ಶಾನುಭಾಗ್
ರಾಗ : ಜನಪದ
ತಾಳ : ಜನಪದ
ಶೈಲಿ : ಜನಪದ
ಸ್ಟುಡಿಯೋ : ಅರ್ಚನ
ವಾದ್ಯ ಗೋಷ್ಠಿ ವಿವರ :
ಕೀ ಬೋರ್ಡ್ - ಶ್ರೀಧರ್
ಕೊಳಲು - ಪ್ರವೀಣ್ ಡಿ. ರಾವ್
ತಬಲ - ವೇಣು
ರಿದಂ ಪ್ಯಾಡ್ - ಅರುಣ
ಸಿತಾರ್ - ಹೆಚ್.ಪಿ. ಶ್ರೀನಿವಾಸ್.

ನಿರ್ಗಮನ