ಚೆನ್ನಬಸವಣ್ಣ
ಪಟವಾಕಾಶವನಡರಿತ್ತೆಂದಡೆ
1329ಪಟವಾಕಾಶವನಡರಿತ್ತೆಂದಡೆ, ಪಟಸೂತ್ರದ ಸಂಚು ಕೆಳಗಿಪ್ಪುದು ನೋಡಾ ! ವ್ಯೋಮದಲ್ಲಿ ಚರಿಸುವ ಸೋಮಸೂರ್ಯರೆಂದಡೆ ಹೇಮಗಿರಿಯ ಸಂಚ ತಪ್ಪದು ನೋಡಾ ! ಭೂಮಿಯನೊಲ್ಲದೆ ಗಗನಕ್ಕೆ ಹಾರಿದವಂಗೆ, ಆ ವ್ಯೋಮದಲ್ಲಿ ನಿಲುವುದಕ್ಕೆ ಒಂದೆಡೆಯುಂಟೆ ? ನಮ್ಮ ಕೂಡಲಚೆನ್ನಸಂಗನ ಶರಣರೊಳಗಿರ್ದು ಸೀಮೆಯ ಮೀರಿದ ನಿಸ್ಸೀಮನು ಸಿದ್ಧರಾಮಯ್ಯನೆಂಬ ಮಾತು ¿ಂತಿರಲಯ್ಯಾ ಪ್ರಭುವೆ.


ಸಂಗೀತ ನಿರ್ದೇಶಕರು : ಅನಂತ ಭಾಗವತ್
ಹಾಡಿದವರ ಹೆಸರು : ಅನಂತ ಭಾಗವತ್
ರಾಗ : ಖಮಾಜ ಆಧಾರಿತ
ತಾಳ : ಕೆಹರವಾ
ಶೈಲಿ : ಸುಗಮ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೀ ಬೋರ್ಡ್ - ನಾಗಭೂಷಣ ಉಡುಪ
ತಬಲ - ಗುರುಮೂರ್ತಿ ವೈದ್ಯ
ರಿದಂ ಪ್ಯಾಡ್ - ಪ್ರದ್ಯುಮ್ನ ಎಸ್.ಜಿ.
ಕೊಳಲು - ಜಿ.ಎಲ್. ರಮೇಶ್ ಕುಮಾರ್

ನಿರ್ಗಮನ