ಚೆನ್ನಬಸವಣ್ಣ
ಬಯಲು ಮೂರ್ತಿಯಾಗಿ ನಿಂದನೊಬ್ಬ ಶರಣ.
3
ಬಯಲು ಮೂರ್ತಿಯಾಗಿ ನಿಂದನೊಬ್ಬ ಶರಣ.
ಆತನ ವಿದ್ಯಾ ಬುದ್ಧಿಯಿಂದ ಹುಟ್ಟಿದಾತ ಬ್ರಹ್ಮ,
ಆತನ ಶಾಂತಿ ಸೈರಣೆಯಿಂದ ಹುಟ್ಟಿದಾತ ವಿಷ್ಣು,
ಆತನ ಕೋಪ ಕ್ರೋಧದಿಂದ ಹುಟ್ಟಿದಾತ ರುದ್ರ,
ಈ ಮೂವರ ಪೀಠವಂತಿರಲಿ, ಆ ಶರಣನನರಿದು ಶರಣೆನುತ್ತಿದ್ದೆನು, ಕೂಡಲಚೆನ್ನಸಂಗಮದೇವಾ.


ಸಂಗೀತ ನಿರ್ದೇಶಕರು : ಕೆ.ಪಿ. ಉಪಾಧ್ಯಾಯ
ಹಾಡಿದವರ ಹೆಸರು : ವೀರಭದ್ರಯ್ಯ ಹಿರೇಮಠ್
ರಾಗ : ಭೈರವ್
ತಾಳ : ದೀಪ್‍ಚಂದಿ
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಬಾನ್ಸುರಿ - ಸಮೀರ ಎಲ್. ರಾವ್
ಕೀ ಬೋರ್ಡ್ - ಪ್ರಸನ್ನ
ಮ್ಯಾಂಡೊಲಿನ್ - ವಿಶ್ವನಾಥ್
ತಬಲ - ಶಶಿಭೂಷಣ್ ಗುರ್ಜರ್.

ನಿರ್ಗಮನ