ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು.
1239
ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು.
ಅದಕ್ಕೆ ಸುತ್ತಲು ಬೇರು ಆವರಿಸಿತ್ತು.
ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು.
ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿಯೆ,
ಮರ ಒಣಗಿತ್ತು, ಉಲುಹು ನಿಂದಿತ್ತು, ಎಲೆ ಉದುರಿತ್ತು.
ತರಗೆಲೆಯಾದ ಶರಣರ ಚರಣವಿಡಿದು ನಿಜಮುಕ್ತಳಾದೆನಯ್ಯಾಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.


ಸಂಗೀತ ನಿರ್ದೇಶಕರು : ಕೆ.ಪಿ. ಉಪಾಧ್ಯಾಯ
ಹಾಡಿದವರ ಹೆಸರು : ಮೈಸೂರು ರಂಗಸ್ವಾಮಿ
ರಾಗ : ಪಹಾಡಿ
ತಾಳ : ದಾದರಾ
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಬಾನ್ಸುರಿ - ಸಮೀರ ಎಲ್.ರಾವ್
ಕೀ ಬೋರ್ಡ್ - ಪ್ರಸನ್ನ
ಮ್ಯಾಂಡೊಲಿನ್ - ವಿಶ್ವನಾಥ್
ತಬಲ - ಶಶಿಭೂೀಷಣ್ ಗುರ್ಜರ್.

ನಿರ್ಗಮನ