ಚೆನ್ನಬಸವಣ್ಣ
ಅಂಗಸಂಗಿಯಾದವಂಗೆ ಲಿಂಗಸಂಗವಿಲ್ಲ,
334ಅಂಗಸಂಗಿಯಾದವಂಗೆ ಲಿಂಗಸಂಗವಿಲ್ಲ, ಲಿಂಗಸಂಗಿಯಾದವಂಗೆ ಅಂಗಸಂಗವಿಲ್ಲ. ಅಂಗಸಂಗವೆಂಬುದು ಅನಾಚಾರ, ಲಿಂಗಸಂಗವೆಂಬುದು ಸದಾಚಾರ. ಇದು ಕಾರಣ, ಅಂಗಸಂಗವ ಬಿಟ್ಟು ಲಿಂಗಸಂಗಿಯಾಗಿರಬೇಕು, ಕೂಡಲಚೆನ್ನಸಂಗಮದೇವಾ.


ಸಂಗೀತ ನಿರ್ದೇಶಕರು : ಎಸ್. ಎಲ್ ವೇಣುಗೋಪಾಲ್
ಹಾಡಿದವರ ಹೆಸರು : ವಾಣಿ ಹರ್ಡೀಕರ್
ರಾಗ : ಶಂಕರ
ತಾಳ : ಧುಮಾಳಿ
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅಶ್ವಿನಿ
ವಾದ್ಯ ಗೋಷ್ಠಿ ವಿವರ :
ಕೊಳಲು - ಶ್ರೀ ಕೆ.ಎಸ್. ರಾಜೇಶ್
ವಯೋಲಿನ್ - ಶ್ರೀ ಮೈಸೂರು ಆರ್. ದಯಾಕರ್
ತಬಲ - ಶ್ರೀ ತುಕಾರಾಮ ರಾವ್ ರಂಗಧೋಳ್ - ಶಿವಮೊಗ್ಗ
ತಬಲ - ಶ್ರೀ ಗುರುಮೂರ್ತಿ ವೈದ್ಯ.

ನಿರ್ಗಮನ