ನೀಲಮ್ಮ
ಪಯಣವಿಲ್ಲದೆ ಗಮನವ ಕಂಡವರುಂಟೆ ?
993
ಪಯಣವಿಲ್ಲದೆ ಗಮನವ ಕಂಡವರುಂಟೆ ?
ಗತಿಯಿಲ್ಲದೆ ಪೂಜೆಯ ಮಾಡಿದವರುಂಟೆ ?
ಹೊಲನಿಲ್ಲದೆ ಫಲವನುಂಡವರುಂಟೆ ?
ಮೃಗವಿಲ್ಲದೆ ಬೇಂಟೆಯನಾಡಿದವರುಂಟೆ ?
ಅರಸಿಯಿಲ್ಲದೆ ಅರಸಾದವರುಂಟೆ ? ಸಂಗಯ್ಯ, ಮುಖವಿಲ್ಲದ ಪ್ರಸಾದವನುಂಡವರುಂಟೆ ?


ಸಂಗೀತ ನಿರ್ದೇಶಕರು : ಚಿಂತಲಪಲ್ಲಿ ಚಂದ್ರಶೇಖರ್
ಹಾಡಿದವರ ಹೆಸರು : ಮೀರಾ ಸಕ್ಸೇನಾ
ರಾಗ : ಚಕ್ರವಾಕ
ತಾಳ : ಅನಿಬದ್ಧ ಶೈಲಿ
ಶೈಲಿ : ಕರ್ನಾಟಕ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೊಳಲು - ವಸಂತಕುಮಾರ ಕುಂಬಳೆ
ಪಿಟೀಲು - ರಾಜೀವಲೋಚನ
ಮೃದಂಗ - ಕೇಶವ ಮೂರ್ತಿ
.

ನಿರ್ಗಮನ