ಪ್ರಸಾದಿ ಭೋಗಣ್ಣ |
66 ಪರುಷರಸ ಸೋಂಕಿದಲ್ಲಿ ಲೋಹಕ್ಕಿದಿರೆಡೆ ಉಂಟೆ ? ಸಿಂಧುವೊಳಕೊಂಡ ದ್ರವ್ಯಕ್ಕೆ ಋತುಕಾಲ ವೈಶಾಖಮಾಸಂಗಳಲ್ಲಿ ಜಲವಿಂಗಲು ಮತ್ತೆ ಕಂಡೆಹೆವೆನಲುಂಟೆ ? ಸರ್ವಸಂಗಪರಿತ್ಯಾಗವ ಮಾಡಿದ ಯೋಗಿ ತಂದೆ ತಾಯಿ ಸಹೋದರ ಬಂಧುಗಳೆಂದು ಪಕ್ಷವ ಅಂಗೀಕರಿಸಿದಡೆ ತ್ರಿಭಂಗಿಯ ಭುಂಜಿಸಿದವ ಮರವೆಯ ಸುರಾಪಾನವ ಅಂಗೀಕರಿಸಿದವ, ಆತ ಲಿಂಗಾಂಗಿಯಲ್ಲ.ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ಸಲ್ಲ. |
ಸಂಗೀತ ನಿರ್ದೇಶಕರು | : | ಎಂ. ಎಸ್. ಶೀಲಾ |
ಹಾಡಿದವರ ಹೆಸರು | : | ಕಲಾವತಿ ಅವಧೂತ್ |
ರಾಗ | : | ಅಭೋಗಿ |
ತಾಳ | : | ಆದಿ |
ಶೈಲಿ | : | ಸುಗಮ |
ಸ್ಟುಡಿಯೋ | : | ಅರವಿಂದ್ |
ವಾದ್ಯ ಗೋಷ್ಠಿ ವಿವರ | : |
ಕೊಳಲು - ವಿದ್ವಾನ್. ಎಂ. ಕೆ. ಪ್ರಾಣೇಶ್
ಪಿಟೀಲು - ವಿದುಷಿ ಚಾರುಲತಾ ರಾಮಾನುಜಂ
ಸಿತಾರ್ - ವಿದುಷಿ ಸುಮಾರಾಣಿ
ತಬಲ - ವಿದ್ವಾನ್. ಸತ್ಯಮೂರ್ತಿ ಮತ್ತು ವಿದ್ವಾನ್ . ಜಗದೀಶ್.
|
ನಿರ್ಗಮನ |