ಸಗರದ ಬೊಮ್ಮಣ್ಣ
ಬಂಗಾರವನೊರೆದು ಬಣ್ಣವ ಕಾಣಬೇಕಲ್ಲದೆ,
559
ಬಂಗಾರವನೊರೆದು ಬಣ್ಣವ ಕಾಣಬೇಕಲ್ಲದೆ,
ಬಣ್ಣವನೊರೆದು ಬಂಗಾರದ ಇರವನರಿಯಬಹುದೆ ?
ಜೀವವರಿದು e್ಞನವ ಕಾಣಬೇಕಲ್ಲದೆ ಜೀವವಳಿದು e್ಞನಕ್ಕೆ ಉಳಿವುಂಟೆ ?
ಅದು ಜ್ಯೋತಿಯ ಮೇಲಣ ತಮವದೆ,
ಕೆಳಗೆ ಬೆಳಗು, ತುದಿಯಲ್ಲಿ ಸಮವದೆ ತಿಳಿದು ನೋಡಿ.
ಆ ಪರಿಯ ಇರವು ಜೀವಪರಮನ ಕಲೆ,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ.


ಸಂಗೀತ ನಿರ್ದೇಶಕರು : ಚಿಂತಲಪಲ್ಲಿ ಚಂದ್ರಶೇಖರ್
ಹಾಡಿದವರ ಹೆಸರು : ಮೀನಾ ಮೋಹನ್
ರಾಗ : ಧರ್ಮವತಿ
ತಾಳ : ಆದಿ
ಶೈಲಿ : ಕರ್ನಾಟಕ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೊಳಲು - ವಸಂತಕುಮಾರ ಕುಂಬಳೆ
ಪಿಟೀಲು - ರಾಜೀವಲೋಚನ
ಮೃದಂಗ - ಕೇಶವ ಮೂರ್ತಿ
ಘಟಂ - ಶ್ರೀಶೈಲಂ.

ನಿರ್ಗಮನ