ವಚನಭಂಡಾರಿ ಶಾಂತರಸ
ಊರ ಹೊರಗೊಂದು ಗಿಡುಮರ.
33
ಊರ ಹೊರಗೊಂದು ಗಿಡುಮರ.
ಅದರೊಳಗೆ ಅಡಗಿಪ್ಪರು ಐವರು ಕಳ್ಳರು :
ಒಬ್ಬ ನರಿ ಬಲೆಯವ, ಒಬ್ಬ ಹುಲಿ ಬಲೆಯವ,
ಒಬ್ಬ ಉಡುಬೇಂಟೆಕಾರ, ಒಬ್ಬ ಬಳ್ಳುವಿನ ಕಾಲುಕಣ್ಣಿಯ ಪುಳಿಂದ,
ಒಬ್ಬ ನಾಲ್ವರ ಬೇಂಟೆಯ ನೋಡುವಉಡಿಗಳ್ಳ.
ಬೇಟೆ ಬೆಂಬಳಿಯಾದುದಿಲ್ಲ,
ಬೇಟೆಗೆ ಹೋದವರೆಲ್ಲರೂಕಾಟಕ್ಕೆಒಳಗಾದರು.
ಇದರಾಟವ ಕೇಳಿಹರೆಂದಂಜಿ,ಅಲೇಖನಾದ ಶೂನ್ಯ ಕಲ್ಲಿನ ನೆಲೆಮನೆಯ ಹೊಕ್ಕೆಯಲ್ಲ.


ಸಂಗೀತ ನಿರ್ದೇಶಕರು : ಫಲ್ಗುಣ ಹೆಚ್.
ಹಾಡಿದವರ ಹೆಸರು : ಹೆಚ್. ಫಲ್ಗುಣ
ರಾಗ : ಖರಹರಪ್ರಿಯ
ತಾಳ : ಕೆಹರವಾ
ಶೈಲಿ : ಜನಪದ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೀ ಬೋರ್ಡ್ - ಶಬ್ಬೀರ್ ಅಹಮದ್
ಕೊಳಲು - ಎಂ. ಕೆ. ಪ್ರಾಣೇಶ್
ರಿದಂ ಪ್ಯಾಡ್ - ಎಸ್. ಬಾಲಸುಬ್ರಹ್ಮಣ್ಯಂ (ಬಾಲಿ)
ತಬಲ - ಎಂ.ಸಿ.ಶ್ರೀನಿವಾಸ್.

ನಿರ್ಗಮನ