ಕನ್ನಡಿಕಾಯಕದ ಅಮ್ಮಿದೇವಯ್ಯ
ಪಂಜ ಹಿಡಿವಂಗೆ ಸಂದೇಹವೆಲ್ಲಿದೆ
19
ಪಂಜ ಹಿಡಿವಂಗೆ ಸಂದೇಹವೆಲ್ಲಿದೆ
ಉರಿವ ಬೆಳಗಿಂಗೆ ಸಂದೇಹವುಂಟೆ?
ಸಂಸಾರ ಸಂದಣಿಯಲ್ಲಿ ಅನಂಗನ ಆತುರದಲ್ಲಿ
ಹೊಂದಿ ಬೇವಂಗೆ ಲಂದಣತನವಲ್ಲದೆ
ನಿಜಪ್ರಸಂಗಿಗೆ, ನಿರತಿಶಯ ಲಿಂಗಾಂಗಿಗೆ, ಪರಬ್ರಹ್ಮಪರಿಣಾಮಿಗೆ
ಜಗದ ಹರದಿಗರಲ್ಲಿ ಸಿಕ್ಕಿ ಪರಿಭ್ರಮಣಕ್ಕೊಳಗಾಹನೆ?
ಇಂತೀ ನಿಜವನರಿದಾತನೆ
ಚೆನ್ನಬಸವಣ್ಣ ಸಾಕ್ಷಿಯಾಗಿಕಮಳೇಶ್ವರಲಿಂಗವು ತಾನೆಂಬೆನು.


ಸಂಗೀತ ನಿರ್ದೇಶಕರು : ಶ್ಯಾಮಲಾ ಜಿ. ಭಾವೆ
ಹಾಡಿದವರ ಹೆಸರು : ಮುದ್ದುಮೋಹನ್
ರಾಗ : ಮಿಶ್ರ ದೇವಾಂಗಿನಿ
ತಾಳ : ಧ್ರುತ್ ಝಪ್‍ತಾಲ್
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಬಾನ್ಸುರಿ (ಕೊಳಲು) - ಕೆ.ಎಸ್. ರಾಜೇಶ್
ಸಿತಾರ್ - ಹೆಚ್.ಪಿ.ಶ್ರೀನಿವಾಸ್
ಕೀ ಬೋರ್ಡ್ - ಉಮೇಶ್
ತಬ¯ - ರಾಜೇಂದ್ರ ನಾಕೋಡ್.

ನಿರ್ಗಮನ