ಹಡಪದ ಅಪ್ಪಣ್ಣ
ಊರ ಮೇಲೆ ಊರ ಕಂಡೆ, ನೀರ ಮೇಲೆ ನೀರ ಕಂಡೆ.
907
ಊರ ಮೇಲೆ ಊರ ಕಂಡೆ, ನೀರ ಮೇಲೆ ನೀರ ಕಂಡೆ.
ಮರನ ಮೇಲೆ ಮರನ ಕಂಡೆ, ಗಿರಿಯ ಮೇಲೆ ಗಿರಿಯ ಕಂಡೆ.
ಉರಿಯ ಮೇಲೆ ಉರಿಯ ಕಂಡೆ. ಈ ಭಾರವ ತಾಳಲಾರದೆ,
ಆ ಉರಿಯೆ ಎದ್ದು ಊರು ಬೆಂದಿತ್ತು, ನೀರು ಬೆಂದಿತ್ತು,
ಮರನು ಬೆಂದಿತ್ತು, ಗಿರಿಯು ಬೆಂದಿತ್ತು.
ಆ ಉರಿ ಉಳಿಯಿತ್ತು, ಆ ಉರಿಯನೆರದು ಸಿರಿಯ ಸೆಳದು
ಪರಮಸುಖಪರಿಣಾಮದೊಳೋಲಾಡುತ್ತ ,
ನಿಮ್ಮ ಬರವನೆ ಹಾರುತಿರ್ದೆನಯ್ಯಾ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ.


ಸಂಗೀತ ನಿರ್ದೇಶಕರು : ಎಸ್.ಆರ್. ರಾಮೃಷ್ಣ
ಹಾಡಿದವರ ಹೆಸರು : ಸುಪ್ರಿಯಾ ಆಚಾರ್ಯಾ
ರಾಗ : ಜುಂಜೂಟಿ
ತಾಳ : ರೂಪಕ್
ಶೈಲಿ : ಸುಗಮ
ಸ್ಟುಡಿಯೋ : ಮiÁ್ಯಸಿಕ್ ಮಿಂಟ್
ವಾದ್ಯ ಗೋಷ್ಠಿ ವಿವರ :
ಕೊಳಲು - ಸಮೀರಾ ಎಲ್ಲ ರಾವ್
ಕ್ಲ್ಯಾರಿಯೊನೆಟ್ - ಪಂ ನರಸಿಂಹಲು ವಡವಾಟಿ
ಸಾರಂಗಿ - ಫಯ್ಯಾಜ್ ಖಾನ್
ವೈಯೊಲಿನ್ - ದೀಪು ನಾಯರ್
ತಬಲ - ಮಡಿಕೇರಿ ಮುಖೇಶ್
ಕೀ ಬೋರ್ಡ್ - ಎಸ್. ಆರ್. ರಾಮಕೃಷ್ಣ
ವೀಣೆ - ಸುಚಿತ್ರ ಲತಾ
ಕುನ್ನಕೋಲ್ - ರಾಘವ ಶ್ರೇಯಸ್ , ತಾಳ ಸಂಯೋಜನೆ - ಗೋಕುಲ್ ಅಭಿಷೇಕ್.

ನಿರ್ಗಮನ