ಚೆನ್ನಬಸವಣ್ಣ
ಊರ ಮುಂದೆ ಶ್ವಾನನ ಕಾಣಬಹುದಲ್ಲದೆ
1035ಊರ ಮುಂದೆ ಶ್ವಾನನ ಕಾಣಬಹುದಲ್ಲದೆ ಸಿಂಹವ ಕಾಣಬಾರದು. ನದಿಯ ಮುಂದೆ ಬಕನ ಕಾಣಬಹುದಲ್ಲದೆ ಹಂಸನ ಕಾಣಬಾರದು. ಪಸರದೊಳಗೆ ಗಾಜಿನ ಮಣಿಯ ಕಾಣಬಹುದಲ್ಲದೆ ರತ್ನವ ಕಾಣಬಾರದು. ಧರೆಯ ಮೇಲೆ ವೇಷಧಾರಿಗಳ ಕಾಣಬಹುದಲ್ಲದೆ (ಶಿವ)ಜ್ಞಾನಿಗಳ ಕಾಣಬಾರದು, ಕೂಡಲಚೆನ್ನಸಂಗಮದೇವಾ.


ಸಂಗೀತ ನಿರ್ದೇಶಕರು : ವಿನಾಯಕ ತೊರವಿ
ಹಾಡಿದವರ ಹೆಸರು : ಅಮೃತಾ ದೇಶ್ ಪಾಂಡೆ
ರಾಗ : ಮೇಘ ಮಧ್ಯಮ
ತಾಳ : ದೀಪ್‍ಚಂದಿ
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಗಣೇಶ್ ಆಡಿಯೋ ಆರ್ಟ್
ವಾದ್ಯ ಗೋಷ್ಠಿ ವಿವರ :
ಹಾರ್ಮೋನಿಯಂ - ಕೀರ್ತಿಕುಮಾರ್ ಬಡಕೇಷಿ
ಕೊಳಲು - ರಾಜೇಶ್ ಕೆ.ಎಸ್
ತಬಲ - ಗುರುಮೂರ್ತಿ ವೈದ್ಯ
ಸಿತಾರ್ - ಶ್ರೀನಿವಾಸ್ ಹೆಚ್.ಪಿ.

ನಿರ್ಗಮನ