ಅಲ್ಲಮಪ್ರಭುದೇವರು
ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ ಶಿವನನರಿವರೆ ?
720ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ ಶಿವನನರಿವರೆ ? ಮನವೆಂಬ ಸಂಕಲ್ಪದ ಕುಣಿಕೆಗೊಳಗಾದವರೆಲ್ಲರೂ ಮಾಯದ ಹೊಡೆಗಿಚ್ಚ ಗೆಲ್ಲಬಲ್ಲರೆ ? ಗುಹೇಶ್ವರಲಿಂಗದಲ್ಲಿ ಸರ್ವಸಂದೇಹವ ಕಳೆದಿಪ್ಪ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು.


ಸಂಗೀತ ನಿರ್ದೇಶಕರು : ಬಿ. ಆರ್.ಹೇಮಂತ್ ಕುಮಾರ್
ಹಾಡಿದವರ ಹೆಸರು : ಎನ್. ಎಸ್. ಆದರ್ಶ
ರಾಗ : ಹರಿಕಾಂಭೋಜಿ
ತಾಳ : ಶ್ರಗತಿ
ಶೈಲಿ : ಸುಗಮ
ಸ್ಟುಡಿಯೋ : ಗಣೇಶ್ ಆಡಿಯೋ ಆರ್ಟ್
ವಾದ್ಯ ಗೋಷ್ಠಿ ವಿವರ :
ತಬಲ - ದತ್ತಕುಮಾರ್ ಮತ್ತು ಸೆಲ್ವರಾಜ್
ಕೀ ಬೋರ್ಡ್ - ಬಾಲಕೃಷ್ಣ ಮತ್ತು ಹೇಮಂತ್ ಕುಮಾರ್
ವಯೊಲಿನ್ - ಹೇಮಂತ್ ಕುಮಾರ್
ಸ್ಪೆಷಲ್ ಎಫೆಕ್ಟ್ - ಪದ್ಮಹೇಮಂತ್ .

ನಿರ್ಗಮನ