ವಚನಭಂಡಾರಿ ಶಾಂತರಸ
ಟಪ್ಪಣವ ಬರೆದ ಚಿತ್ರಜ್ಞನು ಆ ಘಟಕ್ಕೆ ಅಸುವ ಆಶ್ರಯಿಸಬಲ್ಲನೆ ?

47
ಟಪ್ಪಣವ ಬರೆದ ಚಿತ್ರಜ್ಞನು ಆ ಘಟಕ್ಕೆ ಅಸುವ ಆಶ್ರಯಿಸಬಲ್ಲನೆ ? ಶಿಲ್ಪನ ಶಿಲೆ ಲೋಹ ಮೊದಲಾಗಿ ಕುರುಹುಗೊಂಡವ ದೇವತಾಕಳೆಯ ತುಂಬುವನೆ ? ಶಿಲೆ ಲೋಹ ಲಕ್ಷಣವ ನೆಲೆ ಶುದ್ಧವ ಮಾಡುವನಲ್ಲದೆ. ತಾ ಕಟ್ಟುವ ಇಷ್ಟಕ್ಕೆ ಕಟ್ಟಿಲ್ಲ, ಮೇಲೆ ರೊಕ್ಕವ ತಾಯೆಂಬವಳಂತೆಕಟ್ಟಿಹೋದ ಮನವ ಇಷ್ಟದಲ್ಲಿ ನೆಮ್ಮಿಸದೆ. ಇನ್ನಾರ ಕೇಳುವೆ ?ನೀ ಅಲೇಖಮಯ ಶೂನ್ಯ ಕಲ್ಲಿನ ಮರೆಯಾದೆ


ಸಂಗೀತ ನಿರ್ದೇಶಕರು : ದೇವೇಂದ್ರ ಕುಮಾರ್ ಮುಧೋಳ್
ಹಾಡಿದವರ ಹೆಸರು : ಕೈವಲ್ಯಕುಮಾರ್ ಗುರವ್
ರಾಗ : ಕಲಾವತಿ
ತಾಳ : ಕೆಹೆರವಾ
ಶೈಲಿ : ಸುಗಮ
ಸ್ಟುಡಿಯೋ : ಅಶ್ವಿನಿ
ವಾದ್ಯ ಗೋಷ್ಠಿ ವಿವರ :
ಕೀ ಬೋರ್ಡ್ - ನಾಗರಾಜು
ಬಾನ್ಸುರಿ - ಕೆ. ಎಸ್. ರಾಜೇಶ್
ತಬಲ - ಹನುಮಂತ ಕಾರಟಗಿ
ತಾಳ - ಡಿಕ್ಕಿತರಂಗ್ - -ಶಿವಮಲ್ಲು.

ನಿರ್ಗಮನ