ಹಡಪದ ಅಪ್ಪಣ್ಣ
ಅಂಗವ ಮರೆದು ಲಿಂಗವ ಕೂಡಿ,
840
ಅಂಗವ ಮರೆದು ಲಿಂಗವ ಕೂಡಿ,
ಸಂಗವ ಮರೆದು ಜಂಗಮವ ಕೂಡಿ,
ಗುಣವ ಮರೆದು ಗುರುವ ಕೂಡಿ,
ಪರವ ಮರೆದು ಪ್ರಸಾದವ ಕೂಡಿ,
ಹರುಷವ ಮರೆದು ಹರನ ಕೂಡಿ,
ಬೆರಸಿ ಬೇರಿಲ್ಲದಿಹ ನಿಜಶರಣಂಗೆ ನಮೋ ನಮೋ ಎಂಬೆ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ.


ಸಂಗೀತ ನಿರ್ದೇಶಕರು : ಸುಂದರಮೂರ್ತಿ ಎ
ಹಾಡಿದವರ ಹೆಸರು : ಅಭಿಜಿತ್ ಶೆಣೈ ಕೆ
ರಾಗ : ಲಲಿತ್
ತಾಳ : ರೂಪಕ್
ಶೈಲಿ : ಹಿಂದೂಸ್ತಾನಿ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಸಿತಾರ್ - ಪಂಡಿತ್ ಎನ್. ಗೋಪಿನಾಥ್
ಹಾರ್ಮೋನಿಯಂ - ಪಂಡಿತ್ ವಸಂತ ಕನಕಾಪುರ್
ತಬಲ / ಪಕ್ವಾಜ್ - ಶ್ರೀ ಗುರುಮೂರ್ತಿ ವೈದ್ಯ
ತಬಲ - ಶ್ರೀ ಅಭಿಷೇಕ್. ಕೆ. ಶೆನಾಯ್
ತಾಳ - ಶ್ರೀ ಸುರೇಶ್ ಬಾಬು .

ನಿರ್ಗಮನ