ಅಲ್ಲಮಪ್ರಭುದೇವರು
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
639ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು ಬಯಲು ಬಯಲಾಗಿ ಬಯಲಾಯಿತ್ತಯ್ಯಾ. ಬಯಲ ಜೀವನ ಬಯಲ ಭಾವನೆ, ಬಯಲು ಬಯಲಾಗಿ ಬಯಲಾಯಿತ್ತಯ್ಯಾ. ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.


ಸಂಗೀತ ನಿರ್ದೇಶಕರು : ಡಾ. ಜಯಶ್ರೀ ಅರವಿಂದ್
ಹಾಡಿದವರ ಹೆಸರು : ಶ್ರೀಸೂಕ್ತ ಅರವಿಂದ್
ರಾಗ : ಚಾರುಕೇಶಿ
ತಾಳ : ದಾದರಾ
ಶೈಲಿ : ಜನಪದ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೀ ಬೋರ್ಡ್ - ಸಂಗೀತ್
ತಬ¯ - ಹನುಮಂತ್ ಕಾರಟಗಿ
ಸಿತಾರ್ - ವಿಜಯ್
ಸಂತೂರ್ - ಕುಮಾರ್
ರಿದಂ ಪ್ಯಾಡ್ - ಚಂದ್ರಶೇಖರ ಶೆಟ್ಟಿ.

ನಿರ್ಗಮನ