ಅಲ್ಲಮಪ್ರಭುದೇವರು
ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು
725ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ ? ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ ಹಂಬಲಿಸುವ ಪರಿತಾಪವೇನು ಹೇಳಾ ? ಒಂದೆಂಬೆನೆ ಎರಡಾಗಿದೆ ಎರಡೆಂಬೆನೆ ಒಂದಾಗಿದೆ ಅರಿವಿನೊಳಗಣ ಮರಹಿದೇನು ಹೇಳಾ ? ದುಃಖವಿಲ್ಲದ ಅಕ್ಕೆ, ಅಕ್ಕೆಯಿಲ್ಲದ ಅನುತಾಪ ನಮ್ಮ ಗುಹೇಶ್ವರಲಿಂಗದಲ್ಲಿ ತೋರುತ್ತಿದೆ. ನೀನಾರೆಂದು ಹೇಳಾ ಎಲೆ ಅವ್ವಾ ?


ಸಂಗೀತ ನಿರ್ದೇಶಕರು : ಡಾ. ಜಯಶ್ರೀ ಅರವಿಂದ್
ಹಾಡಿದವರ ಹೆಸರು : ರಮೇಶ್ಚಂದ್ರ
ರಾಗ : ಸಿಂಧು ಭೈರವಿ
ತಾಳ : ಕೆಹರವಾ
ಶೈಲಿ : ಜನಪದ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೀ ಬೋರ್ಡ್ - ಸಂಗೀತ್
ತಬ¯ - ಹನುಮಂತ್ ಕಾರಟಗಿ
ಸಿತಾರ್ - ವಿಜಯ್
ಸಂತೂರ್ - ಕುಮಾರ್
ರಿದಂ ಪ್ಯಾಡ್ - ಚಂದ್ರಶೇಖರ ಶೆಟ್ಟಿ.

ನಿರ್ಗಮನ