ಸ್ವತಂತ್ರ ಸಿದ್ಧಲಿಂಗ
ಬಡಕಲ ಪಶುವಿಂಗೆ ಬಲುದಂಡಿಯ ಕಟ್ಟಿದರೆ
828
ಬಡಕಲ ಪಶುವಿಂಗೆ ಬಲುದಂಡಿಯ ಕಟ್ಟಿದರೆ
ಎಳೆದೆಳೆದು ಸಾವಂತೆ,
ಸಾವುತ್ತಿದೆ ನೋಡ.
ಅಜ್ಞಾನ ಜಡಜೀವರು ದೇಹವೆಂಬ ದಂಡಿಯ ಕಟ್ಟಿಸಿಕೊಂಡು,
ಬಿಡಲುಪಾಯುವ ಕಾಣದೆ, ಹೊತ್ತು ತೊಳಲುತ್ತಿದ್ದರಲ್ಲ,
ಜನ್ಮಜನ್ಮಾಂತರದಲ್ಲಿ.
ಶಿವಭಕ್ತಿಯೆಂಬ ಸಜ್ಜನಿಕೆ ಬಂದರೀದೇಹವೆಂಬ
ದಂಡಿಯ ಬಿಡಿಸುವ[ನ]ಯ್ಯಾ,ಕರುಣಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.


ಸಂಗೀತ ನಿರ್ದೇಶಕರು : ಮೈಸೂರು ಮೋಹನ್
ಹಾಡಿದವರ ಹೆಸರು : ಶ್ರೀರಕ್ಷಾ ಅರವಿಂದ್
ರಾಗ : ಲಲತ್
ತಾಳ : ಕೆಹರವಾ
ಶೈಲಿ : ಸುಗಮ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಕೊಳಲು - ರಾಜೇಶ್ ಕೆ.ಎಸ್
ಸಿತಾರ್ - ಶ್ರೀನಿವಾಸ್
ತಬಲ - ಹನುಮಂತ ಕಾರಟಗಿ
ಕೀ ಬೋರ್ಡ್ - ಅಜನೀಶ್ .

ನಿರ್ಗಮನ