ಮಡಿವಾಳ ಮಾಚಿದೇವ
ಅಂಗಾಲಕಣ್ಣವರಾಗಬಹುದಲ್ಲದೆ
445
ಅಂಗಾಲಕಣ್ಣವರಾಗಬಹುದಲ್ಲದೆ
ಮೈಯೆಲ್ಲ ಕಣ್ಣವರಾಗಬಾರದು.
ಮೈಯೆಲ್ಲ ಕಣ್ಣವರಾಗಬಹುದಲ್ಲದೆ
ನೂಸಲ ಕಣ್ಣು ಚತುರ್ಭುಜರಾಗಬಾರದು.
ನೊಸಲಕಣ್ಣು ಚತುರ್ಭುಜದವರಾಗಹುದಲ್ಲದೆ
ಪಂಚವಕ್ತ್ರ ದಶಭುಜದವರಾಗಬಾರದು.
ಪಂಚವಕ್ತ್ರ ದಶಭುಜದವರಾಗಬಹುದಲ್ಲದೆ
ಸರ್ವಾಂಗಲಿಂಗಿಗಳಾಗಬಾರದು.
ಸರ್ವಾಂಗಲಿಂಗಿಗಳಾಗಬಹುದಲ್ಲದೆ, ಕಲಿದೇವಯ್ಯಾ,
ನಿಮ್ಮ ಶರಣ ಬಸವಣ್ಣನಾಗಬಾರದೆಂದರಿದು,ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.


ಸಂಗೀತ ನಿರ್ದೇಶಕರು : ಶಂಕರ್ ಶಾನುಭಾಗ್
ಹಾಡಿದವರ ಹೆಸರು : ಪದ್ಮಾ ಅಡಿಗ
ರಾಗ : ಚಾರುಕೇಶಿ
ತಾಳ : ದಾದರಾ
ಶೈಲಿ : ಸುಗಮ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಸಿತಾರ್ - ಸುಮಾರಾಣಿ
ತಬಲ - ಪ್ರವೀಣ್ ಡಿ ರಾವ್
ಮತ್ತು ಕೊಳಲು -
ರಿದಂ ಪ್ಯಾಡ್ - ಪದ್ಮನಾಭ ಕಾಮತ್.

ನಿರ್ಗಮನ