ಭೋಗಣ್ಣ
ಅಯ್ಯಾ ನಿಮ್ಮ ಶರಣರ ಇರವು,
418
ಅಯ್ಯಾ ನಿಮ್ಮ ಶರಣರ ಇರವು,
ಹರಿಯ ಕೈಯ ದೀವಿಗೆಯಂತೆ ಇದ್ದಿತ್ತಯ್ಯಾ.
ನಿಮ್ಮ ಶರಣರ ಸುಳುಹು,
ಪವನನ ಕೈಯ ಪರಿಮಳದಂತೆ ಇದ್ದಿತ್ತಯ್ಯಾ.
ಹುತಾಸನವೆಂಬ ಗದ್ದುಗೆಯ ಮೇಲೆ
ಕರ್ಪುರದರಸುವಂ ಕುಳ್ಳಿರಿಸಲು,
ಅರಸು ಗದ್ದುಗೆಯ ನುಂಗಿದನೊ ?
ಗದ್ದುಗೆ ಅರಸನ ನುಂಗಿತ್ತೊ? ಎಂಬ ನ್ಯಾಯದಲ್ಲಿ
ಕಂಗಳ ಗದ್ದುಗೆಯ ಮೇಲೆ
ಸದ್ಗುರು ಲಿಂಗವೆಂಬ ಅರಸನಂ ಕುಳ್ಳಿರಿಸಲು,
ಆ ಲಿಂಗ ಕಂಗಳ ನುಂಗಿದನೊ ?
ಕಂಗಳು ಲಿಂಗವ ನುಂಗಿ[ದವೊ]?
ಈ ಉಭಯವ ನುಂಗಿದ ಬೆಡಗು ಬಿನ್ನಾಣವ,ನಿಜಗುರು ಭೋಗೇಶ್ವರಾ, ನಿಮ್ಮ ಶರಣರಲ್ಲಿ ಕಾಣಬಹುದು.


ಸಂಗೀತ ನಿರ್ದೇಶಕರು : ಶಂಕರ್ ಶಾನುಭಾಗ್
ಹಾಡಿದವರ ಹೆಸರು : ಬಿ. ಜೆ. ಭರತ್
ರಾಗ : ಮಿಶ್ರ ವಕುಳಾಭರಣ
ತಾಳ : ಕೆಹೆರವಾ
ಶೈಲಿ : ಸುಗಮ
ಸ್ಟುಡಿಯೋ : ಅರವಿಂದ್
ವಾದ್ಯ ಗೋಷ್ಠಿ ವಿವರ :
ಸಿತಾರ್ - ಸುಮಾರಾಣಿ
ತಬಲ - ಪ್ರವೀಣ್ ಡಿ ರಾವ್
ಮತ್ತು ಕೊಳಲು -
ರಿದಂ ಪ್ಯಾಡ್ - ಪದ್ಮನಾಭ ಕಾಮತ್.

ನಿರ್ಗಮನ