ಪರಿಷ್ಕರಣ:
ಈ ಪರಿಷ್ಕರಣೆಯು ಸಂಕೀರ್ಣ ವಚನಸಂಪುಟ - 4ರ ಸಂಪಾದಕರಾದ ಡಾ. ಬಿ. ಆರ್. ಹೀರೇಮಠ ರವರಿಂದ ಕೆಳಗೆ ಹೆಸರಿಸಿರುವ ವಚನಕಾರರಿಗೆ ನೀಡಲ್ಪಟ್ಟಿದೆ. ಇದು ಕರ್ನಾಟಕ ಸರ್ಕಾರವು ಪ್ರಕಾಶಿಸಿದ ಸಮಗ್ರ ವಚನ ಸಂಪುಟ - 4 ರಲ್ಲಿ ಮೂಡಿಬಂದಿದ್ದು, ಓದುಗರು ವಚನಕಾರರಾದ 1. ರಕ್ಕಸಬೊಮ್ಮಿತಂದೆ 82. ರಾಯಸದ ಮಂಚಣ್ಣ 103. ರೇಚದ ಬಂಕಣ್ಣ 14. ಲದ್ದೆಯ ಸೋಮಯ್ಯ 15. ವಚನ ಭಂಡಾರಿ ಶಾಂತರಸ 656. ವರದ ಸಂಕಣ್ಣ 17. ವೀರಗೊಲ್ಲಾಳ 108. ವೀರಶಂಕರದಾಸಯ್ಯ 19. ವೇದಮೂರ್ತಿ ಸಂಗಣ್ಣ 1010. ವೈದ್ಯಸಂಗಣ್ಣ 2011. ಶಂಕರದಾಸಿಮಯ್ಯ 512. ಶಿವನಾಗಮಯ್ಯ 313. ಶಿವಲೆಂಕ ಮಂಚಣ್ಣ 13214. ಸಂಗಮೇಶ್ವರದ ಅಪ್ಪಣ್ಣ 10115. ಸಕಳೇಶ ಮಾದರಸ 13516. ಸಗರದ ಬೊಮ್ಮಣ್ಣ 9217. ಸತ್ತಿಗೆ ಕಾಯಕದ ಮಾರಯ್ಯ 1018. ಸಿದ್ಧಾಂತಿ ವೀರಸಂಗಯ್ಯ 519. ಸುಂಕದ ಬಂಕಣ್ಣ 10920. ಸೂಜಿಕಾಯಕದ ರಾಮಿತಂದೆ 1021. ಸೊಡ್ಡಳ ಬಾಚರಸ 10522. ಹಡಪದ ಅಪ್ಪಣ್ಣ 24923. ಹಡಪದ ರೇಚಣ್ಣ 924. ಹಾವಿನಹಾಳ ಕಲ್ಲಯ್ಯ 10625. ಹುಂಜಿನ ಕಾಳಗದ ದಾಸಯ್ಯ 126. ಹೆಂಡದ ಮÁರಯ್ಯ 12 27. ಹೊಡೆಹುಲ್ಲ ಬಂಕಣ್ಣ ಹೀಗೆ ಇಪ್ಪತ್ತೇಳು ವಚನಕಾರರ 1210 ವಚನಗಳನ್ನಲ್ಲದೆ ಅಜ್ಞಾತ ವಚನಕಾರರ ವಚನಗಳನ್ನೂ ಇಲ್ಲಿ ಅಳವಡಿಸಲಾಗಿದ್ದುŒ, ಆ ವಿವರ, ಅಂದರೆ ಅವರ ಅಂಕಿತಗಳ ವಿವರ ಹೀಗಿದೆŒ:1. ಅಖಂಡ ಮಂಡಲೇಶ್ವರ 12. ಅನುಗಲೇಶ್ವರ 13. ಅಪ್ರಮಾಣ ಗುಹೇಶ್ವರ 14. ಅಶ್ವಥರಾಮ 1 5. ಆನಂದ ಸಿದ್ಧೇಶ್ವರ 26. ಈಶ್ವರೀಯ ವರದ ಚೆನ್ನರಾಮ 17. ಏಕಾಂತವೀರ ಸೊಡ್ಡಳ 28. ಏಕೋರಾಮೇಶ್ವರಲಿಂಗ 19. ಕಲ್ಲಯ್ಯದೇವರು 1 10. ಕುರಂಗಲಿಂಗ 2 11. ಗಾರ್ಗೇಶ್ವರಲಿಂಗ 112. ಗುರುವರದ ವಿರೂಪಾP್ಷÀ 1 13. ಗುರುವಿಶ್ವೇಶ್ವರಾ 114. ಗೊಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿಬಸವಪ್ರಿಯ ಕೂಡಲಸಂಗಮದೇವ 615. ಚೆನ್ನರಾಮೇಶ್ವರಲಿಂಗ 116. ಜಂಗಮಲಿಂಗಪ್ರಭುವೆ 1717. ಜ್ಯೋತಿಸಿದ್ಧೇಶ್ವರ 118. ತುಂಬೆಯಾಚಲೆಯ ಮನಃಪ್ರಿಯ ಚೆನ್ನಬಂಕೇಶ್ವರ 119. ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ 720. ತ್ರಿಲೋಚನ ಶಂಕರ 121. ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶ 422. ನಂಜುಂಡ ಶಿವ 2423. ನಾಚೇಶ್ವರ124. ನಿಃಕಳಂಕ ಚೆನ್ನಮಲ್ಲಿಕಾರ್ಜುನ ಪ್ರಭುವೆ 125. ನಿಃಕಳಂಕ ಚೆನ್ನಸೋಮೇಶ್ವರ 126. ನಿಜಗುರು ನಿರಾಲಂಬ ಪ್ರಭುವೆ 4127. ನಿಜಗುರು ಶಾಂತಮಲ್ಲಿಕಾರ್ಜುನ 328. ನಿಜಮುಕ್ತಿ ರಾಮೇಶ್ವರ 129. ನಿರ್ಧನಪ್ರಿಯ ರಾಮೇಶ್ವರ 1 30. ನಿರಾಲಯ ನಿಜಗುರುಶಾಂತೇಶ್ವರ 131. ನಿರಾಳಪ್ರಿಯ ಸೊಡ್ಡಳಯ್ಯ 132. ಬಸವಣ್ಣಪ್ರಿಯ ಧರ್ಮೇಶ್ವರ 133. ಭೀಮಬಂಕೇಶ್ವರ 134. ಮರ್ಕಟೇಶ್ವರ135. ಮಹಾಘನ ಪ್ರಸಿದ್ಧ ಪ್ರಸನ್ನ ಸಂಗಮೇಶ್ವರಲಿಂಗ 136. ಮಹಾಲಿಂಗ ವೀರರಾಮೇಶ್ವರ 137. ಮಹಾಲಿಂಗ ಶಶಿಮೌಳಿ ಸದಾಶಿವ 38. ವರದ ಸೋಮನಾಥ 139. ವಿಶ್ವಪತಿ ವಿಶ್ವನಾಥ 140. ವೈನಿಪುರದ ಸಂಗಮೇಶ್ವರ 141. ವೈದ್ಯನಾಥೇಶ್ವರ 142. ಶಂಭು ಮಾರೇಶ್ವರ 143. ಶಾಂತವೀರೇಶ್ವರ 9044. ಶ್ರೀಗುರು ಪ್ರಭುನ್ಮುನೀಶ್ವರ 245. ಶ್ರೀಬಸವಲಿಂಗ 246. ಶ್ರೀಮುಕ್ತಿರಾಮೇಶ್ವರ 147. ಸತ್ಯ ಕರಂಡಮೂರ್ತಿ ಸದಾಶಿವಲಿಂಗ 148. ಸದ್ಗುರು ಚೆನ್ನಮಲ್ಲಿಕಾರ್ಜುನ 249. ಸದ್ಗುರು ಶಂಭು ಸೋಮೇಶ್ವರ 150. ಸದ್ಗುರುಪ್ರಿಯ ಶಿವಸಿದ್ಧರಾಮೇಶ್ವರ 151. ಸರ್ವೇಶ್ವರಲಿಂಗ 152. ಸಿದ್ಧಲಿಂಗಪ್ರಿಯ ಬಸವಪ್ರಭುವೆ 153. ಸೋಮಭೀಮೇಶ್ವರಲಿಂಗ 154. ಹಾಟಕೇಶ್ವರಲಿಂಗ 1ರವರ ಬಗೆಗಿನ ಪರಷ್ಕರಣೆಯನ್ನು ಗಮನಿಸಬಹುದು. ಈ ಸಂಪುಟದಲ್ಲಿ ಸೇರುವ ವಚನಕಾರರ ಸಂಖ್ಯೆಯನ್ನು ನಿರ್ದಿಷ್ಟ ಪಡಿಸಿಕೊಂಡು, ಪ್ರತಿಂುÉೂಬ್ಬನ ವಚನಗಳಿಗಿರುವ ಆಕರಗಳನ್ನು ಪಟ್ಟಿಮÁಡಿಕೊಂಡುದು ನಾವು ಪೂರೈಸಿದ ಪ್ರಥಮ ಕಾರ್ಯ. ಹೀಗೆ ಪಟ್ಟಿಮÁಡಿಕೊಂಡ ಪ್ರಕಟಿತ ಹಾಗೂ ಅಪ್ರಕಟಿತ ಆಕರಗಳಿಂದ ವಚನಗಳನ್ನು ಪ್ರತಿಮÁಡಿ ಒಂದೆಡೆ ಸಂಗ್ರಹಿಸುವ ಕಾರ್ಯವನ್ನು ಆಮೇಲೆ ನೆರವೇರಿಸಲಾಯಿತು. ಇದರಿಂದ ಪ್ರತಿಯೊಂದು ವಚನಗಳಿಗಿರುವ ಸರ್ವ ಆಕರಗಳನ್ನು, ಪಾಠಾಂತರಗಳನ್ನು ಗುರುತಿಸುವುದು ಸಾಧ್ಯವಾಯಿತು. ಹೀಗೆ ಸಂಗ್ರಹಿಸಿದ ವಚನಗಳನ್ನು ಈ ಯೋಜನೆಯ ಕೇಂದ್ರಕಾಯರ್Áಲಯದಲ್ಲಿರುವ `ವಚನ ಬ್ಯಾಂಕಿ'ನ ವಚನಗಳೊಂದಿಗೆ ಪರಿಶೀಲಿಸಿ, ನಮ್ಮ ಗಮನಕ್ಕೆ ಬರದಿರಬಹುದಾದ ವಚನ ಹಾಗೂ ಆಕರಗಳನ್ನು ಪ್ರತಿಮಾಡಿಕೊಂಡು ಆಮೇಲೆ ಸೇರಿಸಿಕೊಳ್ಳಲಾಯಿತು. ಹೀಗಾಗಿ ಪ್ರಾಚೀನ ಆಕರಗಳನ್ನು ಗುರುತಿಸುವ, ವಚನಗಳ ಸಂಖ್ಯೆಯನ್ನು ನಿರ್ದಿಷ್ಟವಾಗಿ ಗೊತ್ತುಪಡಿಸುವ ಕಾರ್ಯ ಇನ್ನಷ್ಟು ಪರಿಪೂರ್ಣವಾಯಿತು.ಪ್ರಾಚೀನವೆನಿಸಿದ ಯೋಗ್ಯವಾದ ಮತ್ತು ಅಧಿಕೃತ ಆಕರದ ವಚನವನ್ನು ಇಲ್ಲಿ ಮೂಲವೆಂದು ಇಟ್ಟುಕೊಂಡು, ಅವಶ್ಯವೆನಿಸಿದಲ್ಲಿ ಭಿನ್ನಪಾಠಗಳಿಂದ ಪಾಠವನ್ನು ಪರಿಷ್ಕರಿಸಲಾಗಿದೆ. ಈ ಪ್ರಸಂಗದಲ್ಲಿ ಪ್ರಕ್ಷಿಪ್ತವಾಗಿರಬಹುದಾದ ವಚನಗಳನ್ನು ಕೈಬಿಡಲಾಗಿದೆ.ಈ ಸಂಪುಟದಲ್ಲಿ ಎರಡು ಕಾಂಡಗಳಿದ್ದುŒ, ಅವರ್ಗೀಯ ಅP್ಷÀರಗಳಿಂದ ಆರಂಭವಾಗುವ ಹೆಸರಿನ ವಚನಕಾರರ ವಚನಗಳನ್ನು ಒಂದನೆಯ ಕಾಂಡದಲ್ಲಿಯೂ, ಅಜ್ಞಾತ ಶರಣರ ವಚನಗಳನ್ನು ಎರಡನೆಯ ಕಾಂಡದಲ್ಲಿಯೂ ಸೇರಿಸಲಾಗಿದೆ. ಶಿವಲೆಂಕ ಮಂಚಣ್ಣ ಹಾಗೂ ಸುಂಕದ ಬಂಕಣ್ಣರ ವಚನಗಳು ಮೂಲದಲ್ಲಿಯೇ `ಸ್ಥಲ' ಗಳಿಗನುಗುಣವಾಗಿ ಇರುವುದರಿಂದ, ಇವುಗಳನ್ನು ಹಾಗೆಂುÉುೀ ಇಟ್ಟುಕೊಂಡು, ಉಳಿದ 25 ವಚನಕಾರರ ವಚನಗಳನ್ನು ಆಕಾರಾದಿಯಲ್ಲಿ ಹೊಂದಿಸಲಾಗಿದೆ. ಅನುಕೂಲತೆ ದೃಷ್ಟಿಯಿಂದ ಅನುಬಂಧದಲ್ಲಿ `ಸ್ಥಲ'ಗಳಿಗನುಗುಣವಾಗಿರುವ ಶಿವಲೆಂಕ ಮಂಚಣ್ಣŒ, ಸುಂಕದ ಬಂಕಣ್ಣರ ವಚನ ಹಾಗೂ ಅಜ್ಞಾತ ಶರಣರ ವಚನಗಳ ಆಕಾರಾದಿಯನ್ನೂ ಎಲ್ಲ ವಚನಗಳ ಕಠಿಣಪದಕೋಶ, ಪ್ರಾಚೀನ ಅಕರಗ್ರಂಥ ಸೂಚಿಗಳನ್ನೂ ಕೊಡಲಾಗಿದೆ.ಪ್ರಸ್ತುತ ಸಂಪುಟದ ಪರಿಷ್ಕರಣ ಕಾರ್ಯದಲ್ಲಿ ಎದುರಾದ ಸಮಸ್ಯೆಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ವಿವರಿಸಬಹುದಾಗಿದೆ.ವಚನಕಾರರ ಹಾಗೂ ಅಂಕಿತಗಳ ನಾಮಸಾದೃಶ್ಯದಿಂದಾಗಿ ವಚನಗಳ ಅಂಕಿತಪಲ್ಲಟ ಕ್ರಿಂುÉು ತೀರ ಸಹಜವಾಗಿ ನಡೆದಿದೆ. ಹೀಗಾಗಿ ಹಡಪದ ಅಪ್ಪಣ್ಣನ ವಚನಗಳು ಸಂಗಮೇಶ್ವರ ಅಪ್ಪಣ್ಣನ ಹೆಸರಿನಲ್ಲಿಯೂ ಸಂಗಮೇಶ್ವರ ಅಪ್ಪಣ್ಣನ ವಚನಗಳು ಹಡಪದ ಅಪ್ಪಣ್ಣನ ಹೆಸರಿನಿಂದಲೂ ಸಿಗುತ್ತವೆ. ಇಷ್ಟೇ ಅಲ್ಲŒ, ಬಸವಣ್ಣŒ, ಅಕ್ಕನಾಗಮ್ಮನವರ ವಚನಗಳು ಸಂಗಮೇಶ್ವರ ಅಪ್ಪಣ್ಣನ ಅಂಕಿತ-ಹೆಸರಿನಲ್ಲಿಯೂ ದೊರಕುತ್ತವೆ. `ಸಂಗಮೇಶ್ವರ ಅಪ್ಪಣ್ಣನ ವಚನಗಳು' ಹೆಸರಿನ ಅಡಿಯಲ್ಲಿ `ಬಸವಪ್ರಿಯ ಕೂಡಲ ಚೆನ್ನಸಂಗಮದೇವ' ಎಂಬ ಅಂಕಿತದೊಡನೆ ಸಿಗುವುದರಿಂದ, ಈ ಅಂಕಿತದ ವಚನಗಳನ್ನು ಸಂಗಮೇಶ್ವರ ಅಪ್ಪಣ್ಣನ ವಚನಗಳೆಂದು ಗುರುತಿಸಲಾಗಿದೆ. ಹಡಪದ ಅಪ್ಪಣ್ಣನ ವಚನಾಂಕಿತ `ಬಸವಪ್ರಿಯ ಕೂಡಲ ಚೆನ್ನಬಸವಣ್ಣ' ಎಂಬುದೆಂದು ಈತನ ವಚನವೊಂದರಿಂದಲೇ ಗೊತ್ತಾಗುತ್ತದೆ. ಹೀಗಿದ್ದರೂ ಈ ವಚನಕಾರನ ವಚನಗಳು `ಬಸವಪ್ರಿಯ ಕೂಡಲ ಚೆನ್ನಸಂಗಮದೇವ,' `ಬಸವಪ್ರಿಯ ಕೂಡಲಚೆನ್ನಸಂಗನ ಬಸವಣ್ಣ', `ಬಸವಪ್ರಿಯ ಕೂಡಲ ಸಂಗಮದೇವ'-ಈ ಮೂರೂ ಮುದ್ರಿಕೆಯಲ್ಲಿಯೂ ಸಿಗುತ್ತವೆ. ಈ ಮೂರೂ ಮುದ್ರಿಕೆಯ ವಚನಕಾರರು ಯÁರೂ ಇಲ್ಲದಿರುವದರಿಂದ, ಇವುಗಳನ್ನು ಹಡಪದ ಅಪ್ಪಣ್ಣನ ವಚನಗಳೆಂದು ಪರಿಗಣಿಸ ಲಾಗಿದೆ. ಹೀಗಿದ್ದರೂ ಹಡಪದ ಅಪ್ಪಣ್ಣ ಹಾಗೂ ಸಂಗಮೇಶ್ವರ ಅಪ್ಪಣ್ಣರ ವಚನಗಳಲ್ಲಿ ಕೆಲವಾದರೂ ಅಂಕಿತ ಪಲ್ಲಟದಿಂದ ಅದಲುಬದಲಾಗಿರುವ ಸಾಧ್ಯತೆಯಿದೆ. ಸುಂಕದ ಬಂಕಣ್ಣನ ವಚನಾಂಕಿತ `ಚೆನ್ನಬಂಕೇಶ್ವರಲಿಂಗ'. ಆದರೆ `ಚೆನ್ನಬಂಕನಾಥ', `ಸಂಗಪ್ರಿಯ ಚೆನ್ನಬಂಕೇಶ್ವರ', `ಚೆನ್ನಬಂಕೇಶ್ವರ', `ವೀರಬಂಕೇಶ್ವರ' ಅಂಕಿತದಲ್ಲಿಯೂ ಈ ವಚನಕಾರನ ವಚನಗಳು ಲಭಿಸುತ್ತವೆ. ಆದುದರಿಂದ ಈ ಎಲ್ಲ ಮುದ್ರಿಕೆಗಳ ವಚನಗಳನ್ನು ಸುಂಕದ ಬಂಕಣ್ಣನ ವಚನಗಳೆಂದೇ ಪರಿಭಾವಿಸ ಲಾಗಿದೆ.ಆರಂಭದ ಅP್ಷÀರ, ಪದ, ಪಾದ ಹಾಗೂ ವಚನಾರ್ಧಗಳ ಪಲ್ಲಟಗಳೊಂದಿಗೆ ವಚನಗಳು ಬೇರೆ ಬೇರೆ ಆಕರಗಳಲ್ಲಿ ಸಿಗುತ್ತವೆ. ವಿವರವಾದ ಪರಿಶೀಲನೆ, ತಲಸ್ಪರ್ಶಿಯಾದ ಅಧ್ಯಯನಗಳ ಮೂಲಕ ಪುನರುಕ್ತ ದೋಷಗಳ ಪ್ರಮÁಣವನ್ನು ಕಡಿಮೆ ಮÁಡಬಹುದಾಗಿದೆ. ಹೀಗೆ ಎಷ್ಟೇ ಕಾಳಜಿ ವಹಿಸಿದರೂ ಮೇಲೆ ಸೂಚಿಸಿದ ಕಾರಣಗಳಿಂದಾಗಿ ಈ ಸಂಪುಟದಲ್ಲಿ ಸಂಗಮೇಶ್ವರ ಅಪ್ಪಣ್ಣ (ವ.ಸಂ. 305=356), ಹಡಪದ ಅಪ್ಬಣ್ಣ (ವ.ಸಂ.1000=1007)ನವರ ವಚನಗಳು ಪುನರುಕ್ತವಾಗಿರುತ್ತವೆ. ಸಹೃದಯರು ಈ ಎರಡರಲ್ಲಿ ಒಂದನ್ನು ಕೈಬಿಡಬೇಕೆಂದು ಬಿನ್ನವಿಸುತ್ತೇನೆ. ವಿದ್ವಾಂಸರ ಸಹಾಯದಿಂದ ಇಲ್ಲಿಯ ಸಂಸ್ಕøತ ಶ್ಲೋಕಗಳನ್ನು ಸಾಧ್ಯವಾದಷ್ಟು ಪರಿಷ್ಕರಿಸಿದ್ದರೂ ಅನೇಕ ಶ್ಲೋಕಗಳ ಪರಿಷ್ಕರಣ ಸಾಧ್ಯವಾಗದ ಕಾರಣ, ಅವುಗಳನ್ನು ಹಾಗೆಯೇ ಇಟ್ಟುಕೊಳ್ಳಲಾಗಿದೆ.`ನಿಜಗುರು ಶಾಂತಮಲ್ಲಿಕಾರ್ಜುನ' ಹಾಗೂ `ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುಜ್ದನೂರೇಶ', `ಶ್ರೀ ಶಾಂತವೀರೇಶ್ವರ' ಈ ಅಂಕಿತಗಳ ವಚನಗಳು ನಮಗೆ ತಡವಾಗಿ ಲಭ್ಯವಾದ ಕಾರಣ, ಇವುಗಳನ್ನು ಪರಿಶಿಷ್ಟದಲ್ಲಿ ಕೊಡಲಾಗಿದೆ. ಇದರಿಂದ ಇಬ್ಬರು ಹೊಸ ಅಜ್ಞಾತ ಶರಣರು ಹಾಗೂ ಇವರ ಐದು ಹೊಸವಚನಗಳು ಕನ್ನಡ ಸಾಹಿತ್ಯಕ್ಕೆ ಸೇರಿದಂತಾಗಿದೆ.


ನಿರ್ಗಮನ